KPTCL Recruitment 2022 : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ವೇತನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
KPTCL Recruitment 2022: Details of Post Vacancies
ಹುದ್ದೆ :
• ಸಹಾಯಕ ಇಂಜಿನಿಯರ್ (ವಿದ್ಯುತ್) : 505 ಹುದ್ದೆ
ವೇತನ ಶ್ರೇಣಿ : ರೂ. 41,130 ರಿಂದ ರೂ. 72,920
ಶೈಕ್ಷಣಿಕ ಅರ್ಹತೆ : ಮನ್ನಣೆ ಪಡೆದ ಯಾವುದೇ ವಿಶ್ವವಿದ್ಯಾಲಯ/ ಸಂಸ್ಥೆಯ (ಎ.ಐ.ಸಿ.ಟಿ.ಇ ಇಂದ ಮಾನ್ಯತೆ ಪಡೆದಿರುವ) ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗನಲ್ಲಿ ಬಿ.ಇ/ ಬಿ.ಟೆಕ್ ಪದವಿ ಹೊಂದಿರತಕ್ಕದ್ದು ಅಥವಾ ಎ.ಎಂ.ಐ.ಇ. (ಭಾಗ-ಎ ಮತ್ತು ಬಿ ಎಲೆಕ್ಟ್ರಿಕಲ್) ಪರೀಕ್ಷೆಯಲ್ಲಿ ಉತ್ತೀರ್ಣತೆ.
• ಸಹಾಯಕ ಇಂಜಿನಿಯರ್ (ಸಿವಿಲ್) : 28 ಹುದ್ದೆ
ವೇತನ ಶ್ರೇಣಿ : ರೂ. 41,130 ರಿಂದ ರೂ. 72,920
ಶೈಕ್ಷಣಿಕ ಅರ್ಹತೆ : ಮನ್ನಣೆ ಪಡೆದ ಯಾವುದೇ ವಿಶ್ವವಿದ್ಯಾಲಯ/ ಸಂಸ್ಥೆಯ (ಎ.ಐ.ಸಿ.ಟಿ.ಇ ಇಂದ ಮಾನ್ಯತೆ ಪಡೆದಿರುವ) ಸಿವಿಲ್ ಇಂಜಿನಿಯರಿಂಗನಲ್ಲಿ ಬಿ.ಇ/ ಬಿ.ಟೆಕ್ ಪದವಿ ಹೊಂದಿರತಕ್ಕದ್ದು ಅಥವಾ ಎ.ಎಂ.ಐ.ಇ. (ಭಾಗ-ಎ ಮತ್ತು ಬಿ ಸಿವಿಲ್) ಪರೀಕ್ಷೆಯಲ್ಲಿ ಉತ್ತೀರ್ಣತೆ.
• ಕಿರಿಯ ಇಂಜಿನಿಯರ್ (ವಿದ್ಯುತ್) : 570 ಹುದ್ದೆ
ವೇತನ ಶ್ರೇಣಿ : ರೂ. 26,270 ರಿಂದ ರೂ. 65,020
ಶೈಕ್ಷಣಿಕ ಅರ್ಹತೆ : ಕರ್ನಾಟಕ ರಾಜ್ಯದ ಪಾಲಿಟೆಕ್ನಿಕ್ ನಿಂದ ವ್ಯಾಸಂಗ ಮಾಡಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರತಕ್ಕದ್ದು.
• ಕಿರಿಯ ಇಂಜಿನಿಯರ್ (ಸಿವಿಲ್) : 29 ಹುದ್ದೆ
ವೇತನ ಶ್ರೇಣಿ : ರೂ. 26,270 ರಿಂದ ರೂ. 65,020
ಶೈಕ್ಷಣಿಕ ಅರ್ಹತೆ : ಕರ್ನಾಟಕ ರಾಜ್ಯದ ಪಾಲಿಟೆಕ್ನಿಕ್ ನಿಂದ ವ್ಯಾಸಂಗ ಮಾಡಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರತಕ್ಕದ್ದು.
• ಕಿರಿಯ ಸಹಾಯಕ : 360 ಹುದ್ದೆ
ವೇತನ ಶ್ರೇಣಿ : ರೂ. 20,220 ರಿಂದ ರೂ. 51,640
ಶೈಕ್ಷಣಿಕ ಅರ್ಹತೆ : ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಸಿಬಿ.ಎಸ್.ಸಿ ಮತ್ತು ಐ.ಎಸ್.ಸಿ ಪರೀಕ್ಷಾ ಮಂಡಳಿಗಳಿಂದ ನಡೆಸಲಾಗುವ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣತೆ.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 1492 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಅರ್ಹತೆ :
ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ನಿಗದಿಪಡಿಸಲಾಗಿದೆ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಪ.ಜಾತಿ/ ಪ.ಪಂ/ ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ : ಸಹಾಯಕ ಇಂಜಿನಿಯರ್ (ವಿದ್ಯುತ್/ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್/ಸಿವಿಲ್), ಕಿರಿಯ ಸಹಾಯಕ ಹುದ್ದೆಗಳಿಗೆ ನೇಮಕಾತಿಯನ್ನು ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. (ಆಪ್ಟಿಟ್ಯೂಡ್ ಪರೀಕ್ಷೆಯು 100 ಅಂಕಗಳ ವಸ್ತು ನಿಷ್ಠ ಬಹು ಆಯ್ಕೆಯ ವಿಧಾನದ 2 ಗಂಟೆ ಅವಧಿಯ ಪರೀಕ್ಷೆಯಾಗಿರುತ್ತದೆ. ಅಪ್ಟಿಟ್ಯೂಡ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಪ್-ಲೈನ್ ಓ.ಎಂ.ಆರ್ ಮಾದರಿಯಲ್ಲಿ ನಡೆಸಲಾಗುವುದು. ಪ್ರತಿ ಪ್ರಶ್ನೆಗೆ 1 ಅಂಕವನ್ನು ಹೊಂದಿರುತ್ತದೆ. ಈ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ)
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿ) ಅರ್ಜಿಯನ್ನು ಸಲ್ಲಿಸಬೇಕು.
ನಿಗದಿತ ಅರ್ಜಿ ಶುಲ್ಕದ ವಿವರ :
• ಸಾಮಾನ್ಯ ವರ್ಗ, ಪ್ರವರ್ಗ 1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ರೂ. 600 (ಸರಕು ಮತ್ತು ಸೇವಾ ತೆರಿಗೆ ಹಾಗೂ ಅಂಚೆ ಸೇವಾ ಶುಲ್ಕ ಒಳಗೊಂಡಂತೆ)
• ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ರೂ. 350 (ಸರಕು ಮತ್ತು ಸೇವಾ ತೆರಿಗೆ ಹಾಗೂ ಅಂಚೆ ಸೇವಾ ಶುಲ್ಕ ಒಳಗೊಂಡಂತೆ)
• ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಶುಲ್ಕ ಪಾವತಿಸುವ ವಿಧಾನ : ಅರ್ಜಿ ಶುಲ್ಕದ ನಮೂನೆಯನ್ನು ಕವಿಪ್ರನಿನಿ ವೆಬ್ ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು, ಅರ್ಜಿ ಶುಲ್ಕವನ್ನು ಕರ್ನಾಟಕ ರಾಜ್ಯದ ಯಾವುದಾದರೂ ಅಂಚೆ ಕಛೇರಿಯ ಮುಖಾಂತರ ಪಾವತಿಸಬೇಕು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಫೆಬ್ರವರಿ 07, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 07, 2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಮಾರ್ಚ್ 09, 2022